ಆಸೆ ಪ್ರಸ್ತುತವಾಗಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು 11 ಡಿಸೆಂಬರ್ 2023ರಂದು ಪ್ರಥಮವಾಗಿ ಪ್ರಸಾರವಾಯಿತು. ಪ್ರಸ್ತುತವಾಗಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೦೭:೩೦ ವರೆಗೆ ಪ್ರಸಾರವಾಗುತ್ತಿದೆ. ಕನ್ನಡದ ಹಿರಿಯ ನಟ ರಮೇಶ್ ಅರವಿಂದ್ ಈ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದ್ದಾರೆ . ಈ ಧಾರಾವಾಹಿಯು ತಮಿಳಿನ ಸಿರಗಾಡಿಕ್ಕ ಆಸೈ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ. ನಿನಾದ್ ಹರಿತ್ಸ, ಪ್ರಿಯಾಂಕಾ ಡಿ ಎಸ್ ಮತ್ತು ಮಂಡ್ಯ ರಮೇಶ್ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. == ಕಥಾ ಹಂದರ == ಧಾರಾವಾಹಿಯ ಕಥೆಯು ಸಾಮಾನ್ಯ ವರ್ಗದಜನರ ಜೀವನದ ಮೇಲೆ ಕೇಂದ್ರಿಕೃತವಾಗಿದೆ. ಚಿಕ್ಕವನಿದ್ದಾಗ ಗೊತ್ತಿಲ್ಲದೇ ನಡೆದ ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ. ಈತನ ಮಾತು ಸ್ವಲ್ಪ ಒರಟಾದರೂ ಮೃದುವಾದ ಮನಸ್ಸನ್ನು ಹೊಂದಿದ್ದಾನೆ. ಜೀವನದಲ್ಲಿ ನೊಂದು - ಬೆಂದು ಆಕಾಂಕ್ಷೆಯನ್ನೇ ಕಳೆದುಕೊಂಡಿರುವ ಸೂರ್ಯನು ತಂದೆಯ ಮುದ್ದಿನ ಮಗನಾಗಿದ್ದಾನೆ. ಮತ್ತೊಂದೆಡೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಮುಖದಲ್ಲಿ ಸದಾ ಮಂದಹಾಸವನ್ನು ಹೊಂದಿರೋ ಕಥಾ ನಾಯಕಿ ಮೀನಾ. ಮನೆಯ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಹೆತ್ತವರಿಗೆ ಸಹಕರಿಸುತ್ತಿರೋ ಮುಗ್ದ ಮನಸಿನ ಕಣ್ಮಣಿಯಾಗಿದ್ದಾಳೆ. ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ತಾಯಿಯ ಎರಡನೇ ರೂಪ ಆಗಿದ್ದಾಳೆ. ಒಂದುಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದಿರುವ ಹುಡುಗ ಸೂರ್ಯನಾಗಿದ್ದರೆ, ಇನ್ನೊಂದೊಡೆ ಮನೆಯವರ ಖುಷಿಗಾಗಿ ತುಂಬಾ ಆಸೆಯನ್ನು ಇಟ್ಟುಕೊಂಡಿರೋ ಮೀನಾ. ಇವರಿಬ್ಬರಿಗೂ ಕಾರಾಣಾಂತರದಿಂದ ಮದುವೆಯಾಗುವ ಸಂದರ್ಭ ಬರುತ್ತದೆ . ತದ್ವಿರುದ್ದವಾಗಿರುವ ಮೀನಾ ಹಾಗೂ ಸೂರ್ಯ ಹೇಗೆ ತಮ್ಮ ಬದುಕುನ್ನು ನಡೆಸುತ್ತಾರೆ ಎಂಬುವುದೇ ಕಥೆಯ ಹಂದರಾವಾಗಿದೆ. == ಪಾತ್ರ ವರ್ಗ == ==== ಮುಖ್ಯ ಪಾತ್ರಗಳು ==== ನಿನಾದ್ ಹರಿತ್ಸ: ಕಥಾನಾಯಕ ಸೂರ್ಯನಾಗಿ. ಪ್ರಿಯಾಂಕಾ ಡಿ ಎಸ್: ಕಥಾನಾಯಕಿ ಮೀನಾ ಪಾತ್ರದಲ್ಲಿ. ==== ಪೋಷಕ ಪಾತ್ರದಲ್ಲಿ ==== ಮಂಡ್ಯಾ ರಮೇಶ್: ರಂಗನಾಥ್ ಪಾತ್ರದಲ್ಲಿ. ಸೂರ್ಯನ ತಂದೆ ಮತ್ತು ಮೀನಾ ಗಂಡನಾಗಿ. ಸ್ನೇಹಾ ಈಶ್ವರ್ : ಮೀನಾ ಪಾತ್ರದಲ್ಲಿ. ರಂಗನಾಥ್ ಹೆಂಡತಿಯಾಗಿ. ಅಮೃತ ರಾಮ್‌ ಮೂರ್ತಿ: ರೋಹಿಣಿ ಪಾತ್ರದಲ್ಲಿ. ಮನೋಜ್ ಹೆಂಡತಿಯಾಗಿ. ಚಂದನಾ ರಾಘವೇಂದ್ರ ನಯನ ?: ಮನೋಜ್ ಪಾತ್ರದಲ್ಲಿ. ಮೀನಾ ಹಿರಿ ಮಗನಾಗಿ ಮತ್ತು ರೋಹಿಣಿ ಗಂಡನಾಗಿ. == ರೂಪಾಂತರಗಳು == == ಉಲ್ಲೇಖಗಳು == == ಬಾಹ್ಯಕೊಂಡಿಗಳು ==